REPORT ON CUB AND BULBUL OVERNIGHT CAMP

To inculcate responsibility, self discipline, belongingness, leadership, life skills and to develop confidence among the students, Hongirana primary section organized Cub and Bulbul  overnight camp  for 3rd and 4th class students on 3rd and 4th January  at Haridravathi. 104 Cub-Bulbuls along with 7 teachers left the campus at 10 am and reached the camp site by 10:30 am.

Camp started by flag hoisting and the Bulbul ring song. After that Ms. Akshitha took the session on Cub and Bulbul history. After that children were separated in 5 groups for different activities like Kims game, knotting, craft, stitching and funny games. Students enjoyed all the activities and learnt many skills. After the delicious lunch same activities went on for different groups.  In the evening they got ready for cultural programme“Kalarava.”  Children performed skit, dance, drama  which was wonderful.

On 4th morning, Children got refreshed and boosted by the B.P.6 exercise.  There was flag procedure followed by the ring song. After tasty breakfast children went for hiking. They were very enthusiastic for the hiking. Around 2 km they walked in the forest and  enjoyed a lot. Before leaving  the camp site students cleaned campsite. Over all the hospitality and the way of organizing   camp was good.

Feed back: Anvesha of class 4th opined that, she learnt many things from the camp. Especially   responsibility, care of belongings and discipline.

Subhashini of class 3rd opined that, she learnt independent living, co-operation among friends.

It was a successful and memorable camp.

Click here to view the album

Advertisements

ಮಕ್ಕಳಲ್ಲಿ ವಿಜ್ಞಾನ ಸಂಶೋಧನೆಯ ತುಡಿತ

“ವಿಜ್ಞಾನವೆಂಬುದು ಕೇವಲ ಜ್ಞಾನವಲ್ಲ, ಅದೊಂದು ಅಚ್ಚರಿ-ಅನ್ವೇಷಣೆಗಳ ಲೋಕ. ಇಲ್ಲಿ ಮೊಗೆದಷ್ಟೂ ಕೊನೆಯಿರದ ಕುತೂಹಲಗಳು, ಆಳಕ್ಕಿಳಿದಷ್ಟು ತಲ್ಲಣಿಸುವ ವಿಸ್ಮಯಗಳು”. ಇಂತಹ ವಿಜ್ಞಾನದ ಬಗೆಗೆ ಮಕ್ಕಳಲ್ಲಿ ಆಸಕ್ತಿ ಮೂಡಿಸಿ, ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿ, ಸಂಶೋಧನೆಯ ತುಡಿತವನ್ನು ಹೆಚ್ಚಿಸುವ ದೃಷ್ಟಿಯಿಂದ ಬೆಂಗಳೂರಿನ ‘ಪ್ರಯೋಗ’ ಸಂಸ್ಥೆಯು ವಿದ್ಯಾರ್ಥಿಗಳಿಗಾಗಿಯೇ ‘ಸೈಕ್ಯಾಸ್ಕೇಡ್’ ಎನ್ನುವಂತಹ ವಿಶಿಷ್ಟ, ವಿನೂತನ ವಿಜ್ಞಾನ ಸ್ಪರ್ಧೆಯನ್ನು ದಿನಾಂಕ 20-01-2019 ರಂದು ಬೆಂಗಳೂರಿನ ಜೈನ್ ಕಾಲೇಜ್ ನಲ್ಲಿ ಏರ್ಪಡಿಸಿತ್ತು. ಈ ಅಪರೂಪದ ಸ್ಪರ್ಧೆಯಲ್ಲಿ, ವಿಜ್ಞಾನದಲ್ಲಿ ಆಸಕ್ತಿಯಿರುವ ಮಕ್ಕಳ ತಂಡವೊಂದು ಕಾಂಟ್ರಾಪ್ಷನ್ ಅನ್ನು ತಯಾರಿಸಿ ಪ್ರಸ್ತುತ ಪಡಿಸಬೇಕಿತ್ತು. ಕಾಂಟ್ರಾಪ್ಷನ್ ತಯಾರಿಸುವುದು ಸುಲಭದ ಮಾತಲ್ಲ. ಒಂದು ಸರಳ ಕೆಲಸಕ್ಕಾಗಿ ಸಂಕೀರ್ಣವಾದ ಹಾದಿಯನ್ನನುಸರಿಸುವುದು ಇದರ ವಿಶೇಷ. ಅಮೇರಿಕಾದ ವ್ಯಂಗ್ಯಚಿತ್ರಕಾರ ರೂಬ್ ಗೋಲ್ಡ್ಬರ್ಗ್ ನಿಂದ ಮೂಡಿಬಂದ ಈ ಪರಿಕಲ್ಪನೆ ಮೇಲ್ನೋಟಕ್ಕೆ ಎಷ್ಟು ಸರಳವಾಗಿ ಕಾಣುವುದೋ ಮಾಡುವುದು ಅಷ್ಟೇ ಕ್ಲಿಷ್ಟಕರ. ಅಪಾರ ತಾಳ್ಮೆ, ಏಕಾಗ್ರತೆ, ಕ್ರಿಯಾಶೀಲತೆ, ತಾರ್ಕಿಕತೆ ಬೇಕು. ‘ಸೈಕ್ಯಾಸ್ಕೇಡ್’ ಸ್ಪರ್ಧೆಯನ್ನು 5 ರಿಂದ 7ನೇ ತರಗತಿಯ ಮಕ್ಕಳಿಗೆ ‘ಕಾಂಚನ್ ಜುಂಗಾ’ ಹಾಗೂ 8 ರಿಂದ 10ನೇ ತರಗತಿಯ ಮಕ್ಕಳಿಗೆ ‘ಮೌಂಟ್ ಎವೆರೆಸ್ಟ್’ ಎಂಬ ಎರಡು ವಿಭಾಗದಲ್ಲಿ ಆಯೋಜಿಸಲಾಗಿತ್ತು. ಹಾಗೆಯೇ ಮೊದಲ ಹಂತದಲ್ಲಿ, ವಿದ್ಯಾರ್ಥಿಗಳು ತಾವು ತಯಾರಿಸಿದ ಕಾಂಟ್ರಾಪ್ಷನ್ ನ ವೀಡಿಯೊವನ್ನು, ಅದರಲ್ಲಿದ್ದ ಹಂತಗಳನ್ನು, ಚಿತ್ರ ಸಮೇತ ಕಳುಹಿಸಬೇಕಿತ್ತು. ನಂತರ ಆಯ್ಕೆಯಾದ ತಂಡಗಳು ಅಂತಿಮ ಸ್ಪರ್ಧೆಯಲ್ಲಿ ಭಾಗವಹಿಸಬೇಕಿತ್ತು.

ಸದಾ ಕ್ರಿಯಾಶೀಲ, ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗುವ ಹೊಂಗಿರಣ ಶಾಲೆಯ 3 ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ‘ಕಾಂಚನ್ ಜುಂಗಾ’ ವಿಭಾಗದಲ್ಲಿ  6ನೇ ತರಗತಿಯ ವಾತ್ಸಲ್ಯ, ಶಮಿತ ಆರ್. ರವರ ಒಂದು ತಂಡ, ಹಾಗೆಯೇ 7ನೇ ತರಗತಿಯ ಪನ್ನಗ ಹೆಗಡೆ, ದರ್ಶನ್ ಮುಕುಂದ್ ಕಾನೆಟ್ಕರ್, ಪನ್ನಗ ಜೆ. ಪಿ. ಮತ್ತು ಜಯಂತ್ ಬಿ. ರನ್ನೂಳಗೊಂಡ ಮತ್ತೊಂದು ತಂಡ, ‘ಮೌಂಟ್ ಎವೆರೆಸ್ಟ್’ ವಿಭಾಗದಲ್ಲಿ, 9ನೇ ತರಗತಿಯ ನೀಲೇಂದ್ರ ಆರ್, ಆದ್ಯ ಎನ್. ಎ., ಸುಹಾಸ್ ಎಸ್. ಮತ್ತು ನಿರಂಜನ್ ಎಸ್. ರನ್ನೊಳಗೊಂಡ ಒಂದು ತಂಡ ಕಾಂಟ್ರಾಪ್ಷನ್ ಗಳನ್ನು ತಯಾರಿಸದ್ದವು.  ಮಾದರಿಗಳು  ಸೃಜನಾತ್ಮಕವಾಗಿದ್ದು, ಮಕ್ಕಳು ಅದರ ತಯಾರಿಕೆಗೆ ದಿನಬಳಕೆಯ ವಸ್ತುಗಳಾದ ಆಟಿಕೆಗಳು, ಐಸ್ ಕ್ರೀಂ ಕಡ್ಡಿಗಳು, ಪೈಪ್, ವಿವಿಧ ಗೋಲಿಗಳು, ಪ್ಲಾಸ್ಟಿಕ್ ಬಾಟಲ್, ಪೆನ್, ಮರದ ಬೆಂಚುಗಳನ್ನು ಬಳಸಿದ್ದರು. ಭಾಗವಹಿಸಿದ 3 ತಂಡಗಳೂ ಅಂತಿಮ ಸ್ಪರ್ಧೆ ಗೆ ಆಯ್ಕೆಯಾದವು. ರಾಜ್ಯಾದಂತ 30 ತಂಡಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು. ಅದರಲ್ಲಿ ಉಳಿದೆಲ್ಲಾ ತಂಡಗಳನ್ನು ಹಿಮ್ಮೆಟ್ಟಿಸಿ ಹೊಂಗಿರಣ ಸಂಸ್ಥೆಯ ಎರಡು ತಂಡಗಳು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿವೆ. ‘ಕಾಂಚನ್ ಜುಂಗಾ’ ವಿಭಾಗದಲ್ಲಿ ಪ್ರಥಮ ಹಾಗೂ ‘ಮೌಂಟ್ ಎವೆರೆಸ್ಟ್’ ವಿಭಾಗದಲ್ಲಿ ದ್ವಿತೀಯ ಬಹುಮಾನ ಪಡೆದು ಸಾಧನೆಗೈದಿದ್ದಾರೆ. ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಹಾಗೂ ಮಾರ್ಗದರ್ಶನ ಮಾಡಿದ ಶಿಕ್ಷಕರನ್ನು ಶಾಲಾ ಆಡಳಿತ ಮಂಡಳಿ ಅಭಿನಂದಿಸಿದೆ.

Click here to view the album

Picnic to Hosagunda

 There was a picnic conducted for the students of Nursery and 1st  standard on 24th  December to Hosagunda. We started  at  9.30 am in the morning with 60 students, 5 teachers and 2 escorts. The students were extremely excited and kept singing songs  in the bus till they  reached the spot.

The first place we visited was the forest named as ‘Devarakaadu’.  Students walked through that forest to  see many ancient trees. Some students climbed on the trees, they sang and danced in the greenery. In between they had time for the  snacks.

Next,  they visited “Uma Maheshwara” temple where the students chanted Shlokha  and went with peace of mind to the dining hall for lunch. Later on, fruits and biscuits were distributed to them.

After  lunch, many activities like passing the ball, hoop relay were conducted by P.E. teacher.

The temple and forest gave an experience of being surrounded by greenery and the beauty of nature. We arrived to our school campus at 3.40 PM.

Indeed, it was a great day for all teachers and students as it strengthened the bond between students and teachers.  Students developed values like sharing, caring, observing and co-operation.

Click here to view the album

ವನಸಂಚಾರ

ಅನುಭವಯುತ ಶಿಕ್ಷಣ ಹಾಗೂ ಸ್ಥಳೀಯ ಪರಿಸರದ ಪ್ರಾಮುಖ್ಯತೆಯನ್ನು ತಿಳಿಸುವ ಉದ್ದೇಶದಿಂದ ದಿನಾಂಕ ೨೪-೧೨-೧೮ ರಂದು ೩ ನೇ ತರಗತಿಯ ಮಕ್ಕಳಿಗೆ ಒಂದು ದಿನದ ವನಸಂಚಾರವನ್ನು ಹೊಸಗುಂದಕ್ಕೆ ಏರ್ಪಡಿಸಲಾಗಿತ್ತು.

ಮುಂಜಾನೆ ಸುಮಾರು ೯.೪೫ ಕ್ಕೆ ಸರಿಯಾಗಿ ೫೭ ಮಕ್ಕಳು ಹಾಗೂ ೩ ಜನ ಶಿಕ್ಷಕರೊಡಗೂಡಿ ಹೊಸಗುಂದಕ್ಕೆ ಪ್ರಯಾಣ ಬೆಳಸಿದೆವು. ಮೊದಲಿಗೆ ಮಕ್ಕಳನ್ನು ‘ದೇವರಕಾಡು’ ಎಂದೇ ಪ್ರಸಿದ್ಧಿ ಹೊಂದಿರುವ ಹೊಸಗುಂದದ ಕಾಡಿಗೆ ಕರೆದೊಯ್ಯಲಾಯಿತು. ಅಲ್ಲಿರುವ ಸುಮಾರು ೬೫೦ ವರ್ಷದ ಹಿಂದಿನ ಮಾವಿನಮರವನ್ನು ನೋಡಿ  ಮಕ್ಕಳು ಖುಷಿಪಡುವುದರ ಜೊತೆಗೆ ಒಬ್ಬರಿಗೊಬ್ಬರು ಕೈಸರಪಳಿ ಮಾಡಿ ಮರವನ್ನು ತಬ್ಬಿಕೊಂಡರು. ಹೀಗೆ ಮುಂದೆ ಸಾಗುತ್ತಾ ಉಮಾಮಹೇಶ್ವರ ವೃಕ್ಷ ಎಂದು ಕರೆಯಲಾಗುವ ಜೋಡಿ ಮರವನ್ನು ನೋಡಿ ಮಕ್ಕಳು ಆಶ್ಚರ್ಯಪಟ್ಟರು. ಹೀಗೆ ವಿವಿಧ ರೀತಿಯ ಗಿಡ, ಮರ,ಬಳ್ಳಿಗಳನ್ನು ನೋಡುತ್ತಾ ತಾವು ತಂದ ಲಘು ಉಪಹಾರವನ್ನು ಸೇವಿಸಿ ಕಂಚಿಕಾಳಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದರು. ಅಲ್ಲಿಯ ದೇವಸ್ಥಾನದ ಶಿಲಾಕೃತಿಯನ್ನು ನೋಡಿ ಮಕ್ಕಳು ಬೆರಗಾಗುವುದರ ಜೊತೆಗೆ ಹೊಸಗುಂದವನ್ನು ಆಳಿದ ರಾಜವಂಶಸ್ಥರ ಬಗ್ಗೆಯೂ ಸಹ ತಿಳಿದುಕೊಂಡರು. ತದನಂತರ ಮಕ್ಕಳು ಉಮಾಮಹೇಶ್ವರ,ಲಕ್ಷ್ಮೀಗಣಪತಿ,ವೀರಭದ್ರ,ಸುಬ್ರಹ್ಮಣ್ಯ,ಪ್ರಸನ್ನ ನಾರಾಯಣ  ಹೀಗೆ ಮುಂತಾದ ದೇವರ ದರ್ಶನ ಪಡೆದು,ದೇವರಭಜನೆಯನ್ನು ಸ್ಮರಿಸಿ ಭೋಜನಶಾಲೆಯಲ್ಲಿ ತಾವು ತಂದ ಆಹಾರವನ್ನು ಸ್ನೇಹಿತರೊಡಗೂಡಿ ಸವಿದರು. ಊಟದ ನಂತರ ದೈಹಿಕ ಶಿಕ್ಷಕರಾದ ಶ್ರೀಯುತ ಗುರುಮೂರ್ತಿಯವರು ಮಕ್ಕಳಿಗೆ ಹಲವು ಆಟಗಳನ್ನು ಆಡಿಸಿ ಮಕ್ಕಳಲ್ಲಿ ಹುರುಪು ಇನ್ನೂ ಹೆಚ್ಚಾಗುವಂತೆ ಮಾಡಿದರು. ನಂತರ ಮಕ್ಕಳಿಗೆ ತಾವು ಗಮನಿಸಿದ್ದನ್ನು ಪುಸ್ತಕದಲ್ಲಿ ಬರೆಯಲು ತಿಳಿಸಲಾಯಿತು. ಹೀಗೆ ಮಕ್ಕಳು ಹೊಸಗುಂದದ ಪ್ರಕೃತಿಸೌಂದರ್ಯವನ್ನು ಮೆಲುಕು ಹಾಕುತ್ತಾ ಶಾಲೆಗೆ ಹಿಂತಿರುಗಿದರು.

ಒಟ್ಟಾರೆಯಾಗಿ ಮರಗಳು ಎಲ್ಲಾ ಜೀವರಾಶಿಗಳಿಗೂ ಹೇಗೆ ಅವಶ್ಯಕವಾಗಿವೆ? ಇವುಗಳನ್ನು ಮುಂದಿನ ಪೀಳಿಗೆಗಾಗಿ ಉಳಿಸಿ  ಬೆಳೆಸಬೇಕು ಎಂಬ ಸದುದ್ದೇಶವನ್ನು  ಬೆಳಸಿಕೊಳ್ಳಲು ಈ ವನಸಂಚಾರವು ಸಹಾಯಕವಾಯಿತು.

 Click here to View the album

SANKALPA (Psychometric Assessment Programme -2018)

It is a known fact that human mind is unreadable and human actions are unpredictable. That too   the adolescent  stage is very dubious and to understand an adolescent is a challenge.  Hence Hongirana Independent PU college conducted a workshop on Psychometric Assessment Programme ‘ Sankalpa’ for the students of    1st PU on 17th and 18th of November 2018. The programme was planned and executed by three eminent and experienced doctors and clinical psychiatrist from Aapyam Ayurveda Foundation Sagar   – Dr. Niranjan Hegde , Dr. Nikhila Hirematt and Dr. Shriharsha.

       The programme was organized to allow the students to supervise their goals and progress and identify the area that need improvement. It aimed to help them to acquire a better understanding of their objectives.

A day before the programme all the 71 students of 1st PU were provided, a questionnaire based on learning problems and adolescent challenges that they are facing. On 17/11/2018 each student was interacted personally and separately by the doctors for 10-15 minutes about the response that they have with the questionnaire. The interaction helped the doctors to know the child personally.

On 18th morning, there was a separate interactive session for both teachers and parents in which they shared the need and problems of students and gave positive parenting tips in attending the challenges of students.

During this session student were engaged in different group activities like topic oriented drawing and presenting it for 5 – 10 minutes, listing out their good and bad habits etc., to know their skills and abilities. After the activity, doctors shared their observation and opinion and motivated the students in adopting needed life skills.

The two days workshops lead students, teachers and parents to think about their attitudes which impacts on developments of students’ future.

Students came with positive feedback. Many felt comfortable in sharing their problems and many got motivated with their interaction and also became serious about their goals. Parents also involved and cooperated in the programme very well.  They came to know, where they are committing mistakes.  Teachers got ideas and ways to handle the challenging issues of students.

Click here to view the album

ಛದ್ಮವೇಷ ಸ್ಪರ್ಧೆ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ

ಸಾಗರ-ದಿನಾಂಕ ೧೭-೧೧-೨೦೧೮ ಹಾಗೂ ದಿನಾಂಕ ೧೯-೧೧-೨೦೧೮ ರಂದು ಹೊಂಗಿರಣ ಸ್ಕೂಲ್ ಆಫ಼್ ಎಕ್ಸಲೆನ್ಸ್,ಅಮಟೆಕೊಪ್ಪದಲ್ಲಿ ಪ್ರಾಥಮಿಕ ವಿಭಾಗದ ಮಕ್ಕಳಿಗೆ ಛದ್ಮವೇಷ ಸ್ಪರ್ಧೆ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ ಶ್ರೀಮತಿ ಸುಜಾತಾ ಚಂದ್ರಶೇಖರ ಇವರು “ ಈ ರೀತಿಯ ಕಾರ್ಯಕ್ರಮಗಳಿಂದ ಮಕ್ಕಳಲ್ಲಿನ ಸ್ಪರ್ಧಾ ಶಕ್ತಿ ಜಾಗೃತವಾಗುತ್ತದಲ್ಲದೇ,ಪೋಷಕರಿಗೂ ಸಹ ತಮ್ಮ ಸೃಜನಶೀಲತೆ ವ್ಯಕ್ತಪಡಿಸುವ ಅವಕಾಶ ದೊರೆತಂತಾಗುತ್ತದೆ” ಎಂದು ಹೇಳಿದರು.

ಶ್ರೀಮತಿ ವನಿತಾ ಹಾಗೂ ಸುಧಾ ರವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ನರ್ಸರಿಯಿಂದ ೩ ನೇಯ ತರಗತಿವರೆಗಿನ ಮಕ್ಕಳಿಗೆ ತರಗತಿವಾರು ವಿಷಯಗಳನ್ನು ಹಂಚಲಾಗಿತ್ತು.ಮಕ್ಕಳು ವಿವಿಧ ವರ್ಣರಂಜಿತ ವೇಷಭೂಷಣಗಳಿಂದ ಎಲ್ಲರ ಮನರಂಜಿಸಿದರು.ನಂತರದಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ವಿಜೇತರಾದ ವಿಧ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಎರಡು ದಿನದ ಕಾರ್ಯಕ್ರಮದಲ್ಲಿ ಸರತಿಯಾಗಿ ಶ್ರೀಮತಿ ವೇದಾವತಿ,ಶ್ರೀಮತಿ ಜಯಂತಿ,ಶ್ರೀಮತಿ ಅಂಕಿತಾ,  ಹಾಗೂ ಶ್ರೀಮತಿ ಸಂಧ್ಯಾರಾಣಿ ತೀರ್ಪುಗಾರರಾಗಿದ್ದರು.ಶ್ರೀಮತಿ ನಳಿನಾ ಸ್ವಾಗತಿಸಿ ಶ್ರೀಮತಿ ಮಧುರಾ ಪ್ರಾಸ್ತಾವಿಸಿ ಶ್ರೀಮತಿ ಅನಿತಾ ವಂದಿಸಿದರು.

Click here to view the album

ಪುಸ್ತಕ ಸಪ್ತಾಹ 2018- 19

ಸಾಗರದ ಅಮಟೆಕೊಪ್ಪದಲ್ಲಿರುವ ಹೊಂಗಿರಣ ವಿದ್ಯಾಸಂಸ್ಥೆಯಲ್ಲಿ ದಿನಾಂಕ ನವೆಂಬರ್ 14 ರಿಂದ 22 ರ ವರೆಗೆ ಪುಸ್ತಕ ಸಪ್ತಾಹವನ್ನು ಆಚರಿಸಲಾಯಿತು.

ವಿದ್ಯಾರ್ಥಿಗಳಲ್ಲಿ ಓದುವ ಕೌಶಲ್ಯವನ್ನು ಬೆಳೆಸುವ ಜೊತೆಗೆ ಗ್ರಂಥಾಲಯದ ಕಡೆಗೆ ಆಕರ್ಷಿಸುವ ಸಲುವಾಗಿ ಪ್ರಾಥಮಿಕ,ಮಾಧ್ಯಮಿಕ, ಪ್ರೌಢ ಹಾಗೂ ಕಾಲೇಜು ವಿಭಾಗದ ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆಗಳನ್ನು ನಡೆಸಲಾಯಿತು.

ಇದರ ಅಂಗವಾಗಿ ದಿನಾಂಕ 22 ರಂದು ನಡೆದ ಸಭಾಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹೆಗ್ಗೋಡಿನ ನೀನಾಸಂನ ಪ್ರಾಂಶುಪಾಲರಾದ ಶ್ರೀಯುತ ವೆಂಕಟರಮಣ ಐತಾಳ್ ಮಾತನಾಡಿ  “ ಗ್ರಂಥಾಲಯ ಶಾಲೆಯ ಆಸ್ತಿ”,  ಪುಸ್ತಕಗಳು ಕೇವಲ ಜ್ಞಾನವನ್ನು ಮಾತ್ರ ನೀಡದೆ ಮಾನವೀಯ ಮೌಲ್ಯಗಳನ್ನು ಬೆಳೆಸುತ್ತವೆ. ಆಧುನಿಕವಾಗಿ ಮಾಧ್ಯಮಗಳು ಎಷ್ಟೇ ಬೆಳೆದಿದ್ದರೂ ಪುಸ್ತಕದಷ್ಟು ಖುಷಿ ಕೊಡುವ ಮಾಧ್ಯಮ ಮತ್ತೊಂದಿಲ್ಲ “ ಎಂದರು.

ಕಾರ್ಯಕ್ರಮದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ರಚಿಸಿದ “ ಭಾವ ಭಂಡಾರ” ಎಂಬ ಕವನ ಸಂಕಲನವನ್ನು ಬಿಡುಗಡೆಗೊಳಿಸಲಾಯಿತು. ಪ್ರಾಸ್ತಾವಿಕ ನುಡಿಗಳಾನ್ನಾಡಿದ ಗ್ರಂಥಪಾಲಕರಾದ ಶ್ರೀಮತಿ  ಶಿಲ್ಪಾ. ಎಮ್. ಹೆಚ್. ರವರು “ ಕಲಿಕೆ ಎಲ್ಲಿಂದಲೋ ಬರುವಂತಹದಲ್ಲ ಅದು ನಮ್ಮೊಳಗಿಂದ ಆಗಬೇಕು ಪುಸ್ತಕದ ಓದು ಮಸ್ತಕಕ್ಕೆ ಹೋದಾಗ ಮಾತ್ರ ಓದು ಯಶಸ್ವಿಯಾಗುತ್ತದೆ.” ಎಂದರು.

ಕಾರ್ಯಕ್ರಮದಲ್ಲಿ ಶಿಕ್ಷಕಿ ರೇಖಾರವರು ಅನಿಸಿಕೆ ಹಂಚಿಕೊಂಡರು. ವಿದ್ಯಾರ್ಥಿಗಳು ಪುಸ್ತಕದ ಮಹತ್ವದ ಬಗ್ಗೆ ಕಿರು ಪ್ರಹಸನ ಪ್ರದರ್ಶಿಸಿದರು. ವಿದ್ಯಾರ್ಥಿ ಮನೋಜ್ ತಮ್ಮ ಅನಿಸಿಕೆ ಹಂಚಿಕೊಂಡರು . ಇದೇ ವೇಳೆ ಪುಸ್ತಕ ಸಪ್ತಾಹದ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಶ್ರೀನಿವಾಸ್ ಪಡವಗೋಡುರವರು ಮಾತನಾಡಿ “ ಇತ್ತೀಚಿನ ದಿನಗಳಲ್ಲಿ ಓದುವವರ ಸಂಖ್ಯೆ ಕಡಿಮೆಯಾಗಿದ್ದು ಮಕ್ಕಳಲ್ಲಿ ಬೇರೆ ಬೇರೆ ಹವ್ಯಾಸಗಳ ಜೊತೆಗೆ ಓದುವ ಹವ್ಯಾಸ ಕರಗತವಾಗಬೇಕು”ಎಂದರು. ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ಶೋಭಾ ರವೀಂದ್ರ, ಉಪ ಪ್ರಾಂಶುಪಾಲರಾದ  ಅರವಿಂದ ಗುರ್ಜಾರ್ ಮತ್ತು ಸಂಸ್ಥೆಯ  ಟ್ರಸ್ಟಿಗಳಾದ  ಅಶೋಕ ಹಾಗೂ ರೇಖಾ ಅಶೋಕ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪ್ರಾರ್ಥಿಸಿದರೆ, ಆತ್ಮಶ್ರೀ ಸ್ವಾಗತಿಸಿದರು, ಆದರ್ಶ ವಂದಿಸಿದರು, ನವ್ಯಶ್ರೀ ನಿರೂಪಿಸಿದರು.

click here to view the album