ಅಮ್ಮನ ಘಟ್ಟಕ್ಕೆ ಪ್ರವಾಸ

ಈ ಹಿಂದೆ ಒಮ್ಮೆ ಅಮ್ಮನ ಘಟ್ಟಕ್ಕೆ ಪ್ರವಾಸಕ್ಕೆಂದು ಹೋದಾಗ ಮೈನಿಮಿರೇಳುವಂತಹ ಅನುಭವ ನಮಗಾಗಿತ್ತು. ಅದೇ ನಿರೀಕ್ಷೆಯನ್ನು ಇಟ್ಟುಕೊಂಡು ಈ ಭಾರಿ ಅಮ್ಮನ ಘಟ್ಟದ ಜೇನು ಕಲ್ಲಮ್ಮ ದೇವಸ್ಥಾನಕ್ಕೆ ನಮ್ಮ ಪ್ರಯಾಣದ ಪ್ರಾರಂಭದಲ್ಲಿ ನಮಗೆ ತುಂಬಾ ಬೇಸರವಾಯಿತು. ಯಾಕೆಂದರೆ ಅಂದಿದ್ದ ಮಲೆನಾಡಿನ ನಿರಂತರ  ಮಳೆ ಇಂದು  ಇರಲಿಲ್ಲ. ಹಾಗಾಗಿ  ಇದು ನಮ್ಮ ಸಂತೋಷಕ್ಕೆ  ಕಡಿವಾಣ  ಹಾಕಿದರೂ ನಾವು ಮುಂದೆ ಸಾಗಿದೆವು. ಆದರೆ ಆಗ ಬಂದದ್ದು ಮಾವಿನ ಹೊಳೆ. ಮಳೆ ಕಡಿಮೆ ಇದ್ದಿದ್ದರಿಂದ ಹೊಳೆಯಲ್ಲಿನ ನೀರು ಅಷ್ಟು ರಭಸವಾಗಿ ಹರಿಯುತ್ತಿರಲಿಲ್ಲ. ಆದರೆ ನಮ್ಮಂತವರಿಗೆ ಕುಚೇಷ್ಟೆಗಳನ್ನು ಮಾಡುವಷ್ಟು ಸಣ್ಣ ಪ್ರಮಾಣದ ನೀರು ಅಲ್ಲಿದ್ದುದ್ದರಿಂದ ನಾವು ನೀರಿನಲ್ಲಿ ವಿವಿಧ ರೀತಿಯ ಆಟಗಳನ್ನು ಆಡಿ ಕೈ ಜಾರಿ ಹೋಗಿದ್ದ ನಮ್ಮ ಸಂತೋಷ ಆಸಕ್ತಿಗಳನ್ನೆಲ್ಲಾ ಮರಳಿ ಪಡೆದೆವು. ಅನಂತರ ನಮ್ಮದೀರ್ಘ ಪ್ರಯಾಣವನ್ನು ಬೆಳೆಸಬೇಕಾದ್ದರಿಂದ ಮತ್ತೆ ನಮ್ಮ ದಾರಿ ಹಿಡಿದೆವು. ಹೀಗೆ ಹೋಗುತ್ತಿರುವಾಗ ಮಾವಿನ ಕಾಯಿ, ನೇರಳೆ ಹಣ್ಣು, ಪೇರಳೆ ಮತ್ತು ಬಾಳೆ ಹಣ್ಣುಗಳನ್ನು ತಿಂದು ಬಾಯಾರಿಕೆಯನ್ನು ನೀಗಿಸಿ ಅನೇಕ ಕಲ್ಲು ಬಂಡೆಗಳನ್ನು ದಾಟುತ್ತಾ ಕಿರಿದಾದ ಕಾಲುದಾರಿಯಲ್ಲಿ ಗುಡ್ಡ ಬೆಟ್ಟಗಳನ್ನು ಏರುತ್ತಾ ಆ ಪ್ರಕೃತಿ ಮಾತೆಯ ಸೌಂದರ್ಯವನ್ನು ಸವಿಯುತ್ತಾ ಸಾಗುತ್ತಿರುವ ವೇಳೆಯಲ್ಲಿ ನಮಗೆ  ಒಂದು ದೊಡ್ಡ ಬಂಡೆ ಕಂಡಿತು. ಅದನ್ನು ಸೂಕ್ಷ್ಮ ರೀತಿಯಲ್ಲಿ ನೋಡಿದಾಗ ಅದೇ ನಾವು ತಲುಪಬೇಕಾದ  ಸ್ಥಳ ಎಂದು ಅರಿತು ಅದನ್ನೇರಿ ದೇವಸ್ಥಾನ ತಲುಪಿದೆವು. ಅಲ್ಲಿ ದೇವರ ದರ್ಶನ ಪಡೆದು ಬರುವಷ್ಟರಲ್ಲಿ ನಮ್ಮ ಹೊಟ್ಟೆ ಹಸಿವಿನಿಂದ  ಬಳಲುತ್ತಿತ್ತು. ಎಲ್ಲರೂ ಒಂದು ಕಡೆ ಕುಳಿತು ಊಟ ಉಪಚಾರವನ್ನೆಲ್ಲಾ  ಮುಗಿಸಿದೆವು. ನಂತರ ಆ ಜಾಗದಲ್ಲಿ ಬಿದ್ದಿದ್ದ ಕಸಗಳನ್ನು ಆಯ್ದು ಚೀಲಗಳಲ್ಲಿ ತುಂಬಿಸಿಕೊಂಡು ಮತ್ತೆ ನಮ್ಮ ಪ್ರಯಾಣವನ್ನು ಹೊಂಗಿರಣದೆಡೆಗೆ ಬೆಳೆಸಿದೆವು.

Click here to view the album

 

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s