ಪರಿಸರ ಪ್ರೀತಿ

ಪರಿಸರ ದಿನ ಆಚರಣೆಗೆ ಸೀಮಿತವಾಗಿರುವ ನಮ್ಮಪರಿಸರ ಕಾಳಜಿ ಸಭೆ ಸಮಾರಂಭ ಗಿಡವೊಂದನ್ನು ನೆಟ್ಟ ನಂತರ ಮುಕ್ತಾಯವಾಗುವುದು ಸಹಜ ಮತ್ತು  ಪುನರಾವರ್ತಿತ ಪ್ರಕ್ರಿಯೆ. ಈ ಪ್ರಕ್ರಿಯೆಯೇ ನಮ್ಮ ಮಹಾನ್ ಸಾಧನೆ ಎಂದು ಪರಿಸರವಾದಿಗಳೆಂದು ಬೀಗುವವರು ನಾವೆಲ್ಲಾ.  ವಿದ್ಯಾರ್ಥಿ ಭುವನೇಶನ  ಕುಂಚದಲ್ಲಿ ಅರಳಿದ ಈ ಚಿತ್ತಾರ ನಮ್ಮೆಲ್ಲಾ ಸಾಧನೆಯನ್ನು ಕಂಡು ನಕ್ಕು ಅಣಕಿಸುವಂತಿದೆ. ಬಹುಕಾಲದ ಹಿಂದೆ ನಾಲ್ಕಾರು ಮರಗಳ ಸುತ್ತ ಮನೆಯೊಂದು ರೂಪುಗೊಂಡ ಸೌಂದರ್ಯ ಇನ್ನೂ ಕಣ್ಣಿಂದ ಮಾಸುವ ಮೊದಲೇ ಎಂಥಹ ವ್ಯತಿರಿಕ್ತವಾದ ವ್ಯವಸ್ಥೆಯನ್ನು ನಾವು ಸೃಷ್ಟಿಸಿಕೊಂಡಿದ್ದೇವೆ. ಮರಗಳ ಜಾಗದಲ್ಲಿಂದು ಮನೆಗಳಿದ್ದಾವೆ. ಸಾವಿರಾರು ಮನೆಗಳ ನಡುವೆ ಒಂದೋ ಎರಡೋ ಮರಗಳೇನೋ ಇದ್ದಾವೆ ನಿಜ. ಆದರೆ ಅವುಗಳು ಇಂದೋ- ನಾಳೆಯೋ ಯಾರ ವಕ್ರ ದೃಷ್ಠಿಗೆ ಬಿದ್ದು ನೆಲ ಕಚ್ಚುವ ಕ್ಷಣವನ್ನು ಆಹ್ವಾನಿಸುತ್ತಾ ಸ್ವಪ್ನ ಸಹಜ ಬೆಳವಣಿಗೆಯನ್ನು ಮರೆತಂತಿವೆ.  ಹೀಗೆ ಮುಂದುವರೆದರೆ ಕೇವಲ ಇಂತಹ ಯಾರೋ ಚಿತ್ರಕಾರನ ಕುಂಚದಲ್ಲಿರುವ ಮರಗಳ ಮುಂದೆ ಆನಂದಿಸಬೇಕಷ್ಟೆ.

ಮನುಷ್ಯ ತನ್ನ ದುರಾಸೆಯ ಬಂಡಿಯೇರಿ  ಚಲಿಸುವ ವೇಗದಲ್ಲಿ ಅಮಾನುಷವಾಗಿ ಪರಿಸರವನ್ನು ಹಿಂದಿಕ್ಕಿ ಮರೆಯ ತೊಡಗಿದ್ದಾನೆ. ಆದರೆ ಈ ಮೆರೆದಾಟ ಬಹುಕಾಲವೇನಲ್ಲವೆಂಬ ಸತ್ಯದ ಅರಿವು ಇನ್ನೂ ಅವನಿಗಾದಂತಿಲ್ಲ. ಕೊಂಚ ಚಿಂತಿಸಿನೋಡಿ. ಇಂದು ನಡೆಸುವ ಪ್ರಕೃತಿಯ ಮಾರಣ ಹೋಮಕ್ಕೆ ಬೆಲೆ ತೆರಲೇಬೇಕು. ಆದರೆ ಬೆಲೆ ತೆರುವವರು ಯಾರು ? ನಾವೆಲ್ಲ ನಮ್ಮ ಮುಂದಿನ ಪೀಳಿಗೆಯ ನಮ್ಮ ಮಕ್ಕಳು ಮರಿಗಳು ಸುಖ ಜೀವನ ನಡೆಸಬೇಕೆಂಬ ಕನಸು ಕಟ್ಟಿಕೊಂಡು ಸಾಕಷ್ಟು ಹಣ ಆಸ್ತಿ ಕೂಡಿಡುತ್ತಾ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವ ಪರಿಸರದ ಬಗ್ಗೆ ಯೋಚಿಸಿಲ್ಲ. ಪರಿಶುದ್ಧವಾದ ಗಾಳಿ ನೀರು ಆಹಾರ ಇವುಗಳನ್ನು ಕೂಡಿಡುವ ಹಣ ಆಸ್ತಿಗಳಿಂದ ಪಡೆಯಲು ಸಾಧ್ಯವಾಗದು. ನಾವು ನಮ್ಮ ಮುಂದಿನ  ಪೀಳಿಗೆಗೆ ಸಂಗ್ರಹಿಸಬೇಕಾದದ್ದು ಹಣ ಆಸ್ತಿ ಒಡವೆಯಲ್ಲ. ಇದಕ್ಕೂ ಸಾವಿರ ಪಟ್ಟು ಮೌಲ್ಯಯುತವಾದ ಪರಿಸರವನ್ನು, ಇದುವೆ  ನಮ್ಮ ಮುಂದಿನ ಪೀಳಿಗೆಗೆ ಕೊಡಬಹುದಾದ ಅತ್ಯಮುಲ್ಯವಾದ ಕೊಡುಗೆ. ಇನ್ನೂ ಎಚ್ಚರಗೊಳ್ಳದೆ ಹೋದರೆ ಹನಿ ನೀರಿಗಾಗಿ, ತುತ್ತು ಆಹಾರಕ್ಕಾಗಿ ಮುಂದೆ ನಡೆಯಬಹುದಾದ ಮಹಾ ಸಂಗ್ರಾಮಕ್ಕೆ, ಮಾರಣಹೋಮಕ್ಕೆ ನಾವು ಕಾರಣವಾಗುತ್ತೇವೆ. ಸಮಸ್ಯೆಗೆ ಪರಿಹಾರ ಹುಡುಕುವ ಬದಲು ಸಮಸ್ಯೆ ಸುಳಿಯದಂತೆ ಎಚ್ಚರವಹಿಸುವುದೇ ಬುದ್ಧಿವಂತಿಕೆಯಲ್ಲವೇ…?

ಸಂದೀಪ ಶೆಟ್ಟಿ                                                                                                                                                ಕನ್ನಡ ಉಪನ್ಯಾಸಕರು

Click here to view the album

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s