ಶ್ರೀ ಕೃಷ್ಣ ಆರಾಧನಾ ಕಾರ್ಯಕ್ರಮ

ದಿನಾಂಕ 15-08-2016 ರ ಸೋಮವಾರದಂದು ಹೊಂಗಿರಣ ಸ್ಕೂಲ್ ಆಫ್ ಎಕ್ಸಲೆನ್ಸ್ ನಲ್ಲಿ  ಶ್ರೀ ಕೃಷ್ಣ ಆರಾಧನಾ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮವು 5ನೇ ತರಗತಿಯ ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭವಾಯಿತು.

ಮುಖ್ಯ ಅತಿಥಿಗಳಾದ ಶ್ರೀಯುತ ವಿಷ್ಣುಮೂರ್ತಿ ಸಂಸ್ಕೃತ ಉಪನ್ಯಾಸಕರು ರೂಪಶ್ರೀ ಕಾಲೇಜು, ಕೇಡಲಸರ ಇವರು ತಮ್ಮ ಭಾಷಣದಲ್ಲಿ ಕೃಷ್ಣನ ಲೀಲೆಗಳು ಸಂಸ್ಕಾರದಿಂದ ಕೂಡಿದೆ ಎಂಬ ಮಾಹಿತಿಯನ್ನು ಮನಮುಟ್ಟುವಂತೆ ನೀಡಿದರು.

ಶ್ರೀಯುತ ಯುವರಾಜ್ ಅಮಟೆಕೊಪ್ಪ (ಗ್ರಾಮ ಪಂಚಾಯಿತಿ ಸದಸ್ಯರು, ಭೀಮನಕೋಣೆ) ಇವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಪುಟಾಣಿಗಳಿಗೆ ಶುಭ ಕೋರಿದರು.

ಶ್ರೀಮತಿ ನಳಿನಾರವರು ತಮ್ಮ ಪ್ರಾಸ್ತಾವಿಕ  ನುಡಿಯಲ್ಲಿ ಇಂದಿನ ಬದಲಾಗುತ್ತಿರುವ  ವಿದ್ಯಮಾನದಲ್ಲಿ ಮಕ್ಕಳು ತಮ್ಮ ಸಂಸ್ಕೃತಿಯ ಶ್ರೀಮಂತಿಕೆಯನ್ನು ಮರೆಯುತ್ತಿದ್ದಾರೆ. ಈ ಬಗೆಯ ಆಚರಣೆಗಳ ಮೂಲಕ ಮೌಲ್ಯಾಧಾರಿತ ಪರಂಪರೆಯತ್ತ ಬೆಳಕು ಚೆಲ್ಲುವುದು ನಮ್ಮ ಸಂಸ್ಥೆಯ ಉದ್ದೇಶವಾಗಿದೆ ಎಂಬುದರ ಮನವರಿಕೆ ಮಾಡಿಕೊಟ್ಟರು.

ಶ್ರೀಮತಿ ಜಯಶ್ರೀ ಸ್ವಾಗತಿಸುವುದರೊಂದಿಗೆ ಅತಿಥಿಗಳ ಮತ್ತು ಅಧ್ಯಕ್ಷರ ಪರಿಚಯ ನೀಡಿದರು.

ಜಾಂಬವತಿ ಕಲ್ಯಾಣದೊಂದಿಗೆ ಕಾರ್ಯಕ್ರಮ ಉದ್ಘಾಟಿಸಲಾಯಿತು. ನಂತರ ಪ್ರಾಥಮಿಕ ವಿಭಾಗದ ಪುಟಾಣಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಶ್ರೀಮತಿ ಜಯಂತಿ ವಂದಿಸಿ ಶ್ರೀಮತಿ ವನಿತಾನಾಡಿಗ್ ನಿರೂಪಿಸಿದರು.

Click here to view the album

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s