ಪಾಲಕರೊಂದಿಗಿನ ಸಂವಾದ ಕಾರ್ಯಕ್ರಮ

ದಿನಾಂಕ 13-08-2016 ರ ಶನಿವಾರ ಮಧ್ಯಾಹ್ನ 2 ಘಂಟೆಗೆ ಹೊಂಗಿರಣ ಸ್ಕೂಲ್ ಆಫ್ ಎಕ್ಸಲೆನ್ಸ್ , ಅಮಟೇಕೊಪ್ಪದಲ್ಲಿ ಮಕ್ಕಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಪಾಲಕರ ಪಾತ್ರ ಎಂಬ ವಿಷಯದ ಕುರಿತು ಪಾಲಕರೊಂದಿಗೆ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಫೈರ್ ಸ್ಪೈಕ್ ಸಂಸ್ಥೆಯ ಸಂಸ್ಥಾಪಕರಾದ ಶ್ರೀಯುತ ರಾಜೇಶ್ ಹಾಗೂ ಶ್ರೀಯುತ ರವಿ ಹೆಗಡೆಯವರು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಚರ್ಚೆಯಲ್ಲಿ ಮಕ್ಕಳನ್ನು ಶಾಲೆಗೆ ಸೇರಿಸಲು ಕಾರಣ ಮತ್ತು ಶಾಲೆಯ ಆಯ್ಕೆಯಿಂದ ಆರಂಭಗೊಂಡು, ಸ್ಪರ್ಧೆ ಎಂದರೇನು? ಯಾರೊಡನೆ ಸ್ಪರ್ಧೆ  ನಡೆಸಬೇಕು ಎಂಬ ಅಂಶದಲ್ಲಿ ನಮಗೆ ನಾವೇ ಸ್ಪರ್ಧಿಗಳಾಗಬೇಕು ಎಂಬುದು ಎಲ್ಲರ ನಿಲುವಾಯಿತು.

ಶಿಕ್ಷಣ ಸಂಸ್ಥೆಯು ಮುಗುವಿನ ಸರ್ವಾಂಗೀಣ ಪ್ರಗತಿಯಲ್ಲಿ ಯಾವ ಪಾತ್ರವನ್ನು ವಹಿಸಬೇಕು? ಪಾಲಕರು ಮತ್ತು ಸಮಾಜದ ಪಾತ್ರವೇನು ? ಎಂಬುದರ ಕುರಿತು ಚರ್ಚೆ ಏರ್ಪಟ್ಟು ಇಂದಿನ ಆಧುನಿಕ ಜಗತ್ತು ಸಂಪೂರ್ಣವಾಗಿ ತಂತ್ರಜ್ಞಾನದ ತಳಹದಿಯಲ್ಲಿ ಬೆಳೆಯುತ್ತಿದೆ, ಇದರಿಂದ ಮಾನವ ರಹಿತ ಉದ್ಯೋಗಗಳು   ಸೃಷ್ಟಿಯಾಗಿ ಎಲ್ಲ ಕಾರ್ಯವು ಯಂತ್ರವೇ ನಿರ್ವಹಿಸುವ ಪರಿಸ್ಥಿತಿ ಎದುರಾಗುತ್ತದೆ. ಅದಕ್ಕೆ ಹೊಂದಿಕೊಂಡು ನಮ್ಮ ಬದುಕು ನಿರ್ವಹಿಸುವ ಕೌಶಲ್ಯಾಧಾರಿತ ಶಿಕ್ಷಣ  ನಮ್ಮ ಮಕ್ಕಳಿಗೆ ಸಿಗುವಂತಾಗಬೇಕು. ಪಾಲಕರು ತಮ್ಮ ಮಕ್ಕಳಿಗೆ ಈ ಮಾದರಿಯಲ್ಲಿ ಮಾರ್ಗದರ್ಶನ ನೀಡುವುದು ತೀರಾ ಅಗತ್ಯವಾಗಿದೆ.

ಪೋಷಕರು ತಮ್ಮ ಆಸೆ ಆಕಾಂಕ್ಷೆಗಳನ್ನು ಮಕ್ಕಳ ಮೇಲೆ ಹೇರದೆ, ಕೌಶಲ್ಯಾಧಾರಿತ ಬದುಕಿಗೆ ಅಣಿಗೊಳಿಸಿಕೊಳ್ಳುವತ್ತ ಗಮನ ನೀಡುವಂತೆ ಮಾರ್ಗದರ್ಶನ ಮಾಡಬೇಕು ಎನ್ನುವ ನಿರ್ಣಯದೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.

Click here to view the album

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s