ಶೈಕ್ಷಣಿಕ ಚಟುವಟಿಕೆಯಲ್ಲಿ ಕ್ರೀಡೆಯು ಒಂದು ಅವಿಭಾಜ್ಯ ಅಂಗವಾಗಿರಲಿ.

ಕ್ರೀಡೆ ಶಿಕ್ಷಣದ ಒಂದು ಭಾಗ, ಶಿಕ್ಷಣದ ಜೊತೆಯೇ ಕ್ರೀಡೆಯಲ್ಲಿ ತೊಡಗುವುದು ಸ್ಪರ್ಧಾತ್ಮಕ ಯುಗದಲ್ಲಿ ಅನಿವಾರ್ಯ – ಶ್ರೀಕಾಂತ್ ಹೆಗಡೆ

ದಿನಾಂಕ ೧೩.೧೧.೨೦೧೬ ರಂದು ಸಾಗರದ ಹೊಂಗಿರಣ ಶಾಲೆಯಲ್ಲಿ ಆಯೋಜಿಸಲಾಗಿದ್ದ ಶ್ರೀಯುತ ಕೆ. ಜಿ. ರವೀಂದ್ರ ಸ್ಮರಣಾರ್ಥ್ ವಾಲಿಬಾಲ್ ಪಂದ್ಯಾವಳಿ ಹಾಗು ಶಿವಮೊಗ್ಗದ ಸಿ.ಬಿ.ಎಸ್. ಇ. ಶಾಲೆಗಳ ಸಹ್ಯಾದ್ರಿ ಸಹೋದಯದ ಖೋ ಖೋ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಶಿವಮೊಗ್ಗದ ಜ್ಞಾನದೀಪ ಶಾಲೆಯ ಪ್ರಾಂಶುಪಾಲರಾದ  ಶ್ರೀ ಶ್ರೀಕಾಂತ್ ಹೆಗಡೆಯವರು “ಶೈಕ್ಷಣಿಕ ಅಭಿವೃದ್ಧಿಯೆಂದರೆ, ಶಾಲೆಯ ಪಠ್ಯಗಳ ಜ್ಞಾನವಲ್ಲ. ಸಹಪಠ್ಯ ಚಟುವಟಿಕೆಯು ಅತ್ಯಗತ್ಯ. ಅದರಲ್ಲೂ ಕ್ರೀಡೆಯು ದೈಹಿಕ ಹಾಗೂ ಮಾನಸಿಕ ಶಕ್ತಿಯನ್ನು ನೀಡುತ್ತದೆ ಇದು ಶೈಕ್ಷಣಿಕ ಅಭಿವೃದ್ಧಿಗೆ ಸಹಕಾರಿ” ಎಂದರು. ಹಾಗೆಯೇ “ಹೊಂಗಿರಣ ಸಂಸ್ಥೆ ಇಂತಹ ಅನೇಕ ಚಟುವಟಿಕೆಯನ್ನು ನಡೆಸುತ್ತಿದ್ದು ಒಂದು ಪುಟ್ಟ ಹಳ್ಳಿಯಲ್ಲಿದ್ದರೂ ಕೀರ್ತಿ ಎಲ್ಲೆಡೆ ಹಬ್ಬಿದೆ” ಎಂದರು.

ಪ್ರಾಸ್ತಾವಿಕ ನುಡಿಗಳಾನ್ನಾಡಿದ ಅರವಿಂದ ಗುರ್ಜರ್ – ಸಂಸ್ಥೆಯ ಹುಟ್ಟು,  ಬೆಳವಣಿಗೆ ಹಾಗೂ ಸಂಸ್ಥಾಪಕರಾದ ರವೀಂದ್ರ  ಅವರ ಕನಸಿನ ಬಗ್ಗೆ ಮಾತನಾಡಿದರು.  ಇದೇ ವೇಳೆ ಎ. ಐ. ಸಿ. ಎಸ್. ಮತ್ತು ಸಿ.ಬಿ.ಎಸ್.ಇ. ವಿಭಾಗ ಶಾಲೆಗಳ ನಡುವಿನ ವಾಲಿಬಾಲ್ ಪಂದ್ಯಾವಳಿಯಲ್ಲಿ ವಿಜೇತರಾದ ಹೊಂಗಿರಣ ಬಾಲಕರ ವಾಲಿಬಾಲ್ ತಂಡವನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಹೊಂಗಿರಣ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ಶೋಭಾ ರವೀಂದ್ರರವರು ಮಾತನಾಡಿ,  “ ಕ್ರೀಡೆ ದೇಹದ ಶಕ್ತಿಯನ್ನು ಒಟ್ಟುಗೊಡಿಸಿ ಹೋರಾಟದ ಛಲವನ್ನು ಬೆಳೆಸುತ್ತದೆ. ಎಲ್ಲರೂ ಗೆಲ್ಲಲು ಸಾಧ್ಯವಿಲ್ಲ,  ಗೆದ್ದವರನ್ನ ಗೌರವಿಸಬೇಕು ಜಯ ಸಿಗದವರು ನಿರಂತರ ಪ್ರಯತ್ನದಲ್ಲಿ ತೊಡಗಬೇಕು” ಎಂದರು.

ಕಾರ್ಯಕ್ರಮದಲ್ಲಿ, ಸಂಸ್ಥೆಯ ವಿವಿಧ ವಿಭಾಗಗಳ ಮುಖ್ಯಸ್ಥರು,   ವಿವಿಧ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಕುಮಾರಿ ಅಂಜಲಿ ಸ್ವಾಗತಿಸಿದರೆ. ಶ್ರೀಮತಿ ಹೇಮಾ ವಂದಿಸಿದರು. ಶಿಕ್ಷಕಿ ಕಲ್ಪನಾರವರು ನಿರೂಪಿಸಿದರು. ಹೊಂಗಿರಣ ವಿದ್ಯಾರ್ಥಿಗಳು ಪ್ರಾರ್ಥನೆಯೊಂದಿಗೆ ಚಾಲನೆ ನೀಡಿದರು.

 

“ ಗೆದ್ದವರನ್ನು ಅಭಿನಂದಿಸಿ, ಸೋತವರು ಗೆಲುವಿಗೆ ನಿರಂತರ ಪ್ರಯತ್ನ ನಡೆಸಿ” – ಸತ್ಯನಾರಾಯಣ ಭಾಗಿ

ಸಾಗರದ ಅಮಟೆಕೊಪ್ಪದ ಹೊಂಗಿರಣ ಶಾಲೆಯಲ್ಲಿ ಆಯೋಜಿಸಲಾಗಿದ್ದ  ದಿ. ಕೆ.ಜಿ. ರವೀಂದ್ರ ಸ್ಮರಣಾರ್ಥ ವಾಲಿಬಾಲ್ ಪಂದ್ಯಾವಳಿ  ಹಾಗೂ ಸಹ್ಯಾದ್ರಿ ಸಹೋದಯ ಶಾಲೆಗಳ ಖೋ – ಖೋ ಪಂದ್ಯಾವಳಿಯ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿದ್ಯಾಭಿವೃದ್ಧಿ ಸಂಘ ಕೇಡಲಸರದ ಅಧ್ಯಕ್ಷರಾದ ಶ್ರೀ ಸತ್ಯನಾರಾಯಣ ಭಾಗಿಯವರು ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ “ಕ್ರೀಡೆ ಎಂಬುದು ಕೇವಲ ದೈಹಿಕ ಕಸರತ್ತಲ್ಲ ಮೌಲ್ಯಗಳನ್ನು ಬೆಳಸುತ್ತದೆ. ನಾವು ಗೆದ್ದರೆ ಗೆಲುವಿಗೆ ನೆರವಾದವರಿಗೆ ವಂದಿಸಬೇಕು. ಸೋತರೆ ಗೆದ್ದವರನ್ನು ಅಭಿನಂದಿಸಿ ನಿರಂತರ ಪ್ರಯತ್ನದಲ್ಲಿ ತೊಡಗಬೇಕು” ಎಂದರು

ಕೆ. ಜಿ. ರವೀಂದ್ರ ಸ್ಮರಣಾರ್ಥ ವಾಲಿಬಾಲ್ ಪಂದ್ಯಾವಳಿಯಲ್ಲಿ ಬಾಲಕರ ವಿಭಾಗದಲ್ಲಿ ಹೋಲಿ ರೆಡಿಮರ್, ಹೊಸನಗರ ಪ್ರಥಮ ಸ್ಥಾನ ಪಡೆದರೆ, ಪ್ರಗತಿ ಪ್ರೌಢಶಾಲೆ ಸಾಗರ ದ್ವಿತೀಯ ಸ್ಥಾನ ಪಡೆದರು. ಬಾಲಕಿಯರ ವಿಭಾಗದಲ್ಲಿ ಇಂದಿರಾ ಗಾಂಧಿ ಕಾಲೇಜ್ ಪ್ರಥಮ ಸ್ಥಾನ ಹಾಗೂ ಹೊಂಗಿರಣ ದ್ವಿತೀಯ ಸ್ಥಾನ ಪಡೆದರು.

ಸಹ್ಯಾದ್ರಿ ಸಹೋದಯ ಶಾಲೆಗಳ ಖೋ – ಖೋ ಪಂದ್ಯಾವಳಿಯ ೧೪ ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಹೊಂಗಿರಣ ಸ್ಕೂಲ್ ಆಫ್ ಎಕ್ಸಲೆನ್ಸ್ ಪ್ರಥಮ ಹಾಗೂ ಜ್ಞಾನದೀಪ ಶಾಲೆ, ಶಿವಮೊಗ್ಗ ದ್ವಿತೀಯ ಸ್ಥಾನ. ೧೪ ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಹೊಂಗಿರಣ ಪ್ರಥಮ ಸ್ಥಾನ ಹಾಗೂ ಜ್ಞಾನ ದೀಪ ಶಾಲೆ ಶಿವಮೊಗ್ಗ ದ್ವಿತೀಯ ಸ್ಥಾನ. ೧೭ ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಹೊಂಗಿರಣ ಪ್ರಥಮ ಸ್ಥಾನ,  ನ್ಯಾಷನಲ್ ಪಬ್ಲಿಕ್ ಸ್ಕೂಲ್ ಶಿವಮೊಗ್ಗ ದ್ವಿತೀಯ ಸ್ಥಾನ,  ೧೭ ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಭಾರತೀಯ ವಿದ್ಯಾಭವನ,  ಶಿವಮೊಗ್ಗ ಪ್ರಥಮ ಹಾಗೂ ಹೊಂಗಿರಣ ದ್ವಿತೀಯ ಸ್ಥಾನ  ಪಡೆದರು

ಕಾರ್ಯಕ್ರಮದಲ್ಲಿ ಶ್ರೀಮತಿ ಶೋಭಾ ರವೀಂದ್ರ, ಶ್ರೀ ಶ್ರೀಕಾಂತ್ ಹೆಗಡೆ,  ಶ್ರೀ ಅರವಿಂದ ಗುರ್ಜಾರ್, ವಿವಿಧ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು ಪೋಷಕರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹೊಂಗಿರಣದ ವಿಧ್ಯಾರ್ಥಿನಿಯರು ಪ್ರಾರ್ಥಿಸಿದರೆ. ಸುನೀಲ್ ಕಾರ್ಯಕ್ರಮ ನಿರ್ವಹಿಸಿದರು.

click here to album 

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s