ಪುಸ್ತಕ ಸಪ್ತಾಹ

ಸಾಗರದ ಅಮಟೆಕೊಪ್ಪದಲ್ಲಿರುವ ಹೊಂಗಿರಣ ವಿದ್ಯಾಸಂಸ್ಥೆಯಲ್ಲಿ ದಿನಾಂಕ ನವೆಂಬರ್ ೧೪ ರಿಂದ ೨೦ ರವರೆಗೆ ಪುಸ್ತಕ ಸಪ್ತಾಹವನ್ನು ಆಚರಿಸಲಾಯಿತು. ವಿದ್ಯಾರ್ಥಿಗಳಲ್ಲಿ ಓದುವ ಕೌಶಲವನ್ನು ಬೆಳೆಸುವ ಜೊತೆಗೆ ಗ್ರಂಥಾಲಯ ಕಡೆಗೆ ಆಕರ್ಷಿಸುವ ಸಲುವಾಗಿ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ವಿಭಾಗಗಳ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು.

ಇದರ ಅಂಗವಾಗಿ ದಿನಾಂಕ ನವೆಂಬರ್ ೧೮ ರಂದು ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ  ಆಗಮಿಸಿದ್ದ ಹಿರಿಯ  ಸಾಹಿತಿಗಳಾದ ಡಾ. ಶ್ರೀಕಂಠ ಕೂಡಿಗೆಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ  ” ಪುಸ್ತಕ ಎಂಬುದೇ ಶಕ್ತಿ, ಪುಸ್ತಕಗಳನ್ನು ಸಮರ್ಪಕವಾಗಿ ಬಳಸಿಕೊಂಡರೆ ಜ್ಞಾನಾರ್ಜನೆ ಸಾಧ್ಯ. ಹೊಂಗಿರಣದಂತಹ ಗ್ರಾಮೀಣ ಪ್ರದೇಶದಲ್ಲಿರುವ ಶಾಲೆಯಲ್ಲಿ ಸಾವಿರಾರು  ಪುಸ್ತಕಗಳಿರುವುದು ಆಶ್ಚರ್ಯ ತಂದಿದೆ” ಎಂದರು.

ಕಾರ್ಯಕ್ರಮದ  ಮತ್ತೊಬ್ಬ ಮುಖ್ಯ ಅತಿಥಿಯಾದ ಡಾ. ಪ್ರಭಾಕರ್ ರಾವ್ ಮಾತನಾಡಿ ” ಪುಸ್ತಕ ಅಸೀಮ ಶಕ್ತಿಯಾಗಿದ್ದು ಹೆಚ್ಚು ಹೆಚ್ಚು

ಪುಸ್ತಕವನ್ನು ಓದಿದವನು ಮಾತ್ರ ಪ್ರಸ್ತುತ ಸಮಾಜದಲ್ಲಿ ಗೌರವ ಸಂಪಾದಿಸಲು ಸಾಧ್ಯ” ಎಂದರು.

ಕಾರ್ಯಕ್ರಮದ  ಪ್ರಾಸ್ತಾವಿಕ ನುಡಿಗಳನ್ನಾಡಿದ ಉಪನ್ಯಾಸಕರಾದ ಸಂದೀಪ ಶೆಟ್ಟಿ ಹೊಂಗಿರಣ ಗ್ರಂಥಾಲಯ ಹಾಗೂ ಪುಸ್ತಕ ಸಪ್ತಾಹದ ಆಚರಣೆಯ ಉದ್ದೇಶದ ಬಗ್ಗೆ ತಿಳಿಸುತ್ತಾ ಗ್ರಂಥಾಲಯ ಅಭಿವೃದ್ಧಿಯಾದರೆ ಶಾಲೆಗಳು ಅಭಿವೃದ್ಧಿಯಾದಂತೆ, ಗ್ರಂಥಾಲಯ ಅಭಿವೃದ್ಧಿ ಎಂದರೆ ಪುಸ್ತಕಗಳ ಸಂಖ್ಯೆ ಹೆಚ್ಚಾಗುವುದಲ್ಲ ಓದುಗರ ಸಂಖ್ಯೆ ಹೆಚ್ಚಾಗುವುದು ಎಂದರು.

ಕಾರ್ಯಕ್ರಮದಲ್ಲಿ ಶಿಕ್ಷಕ ಸುನೀಲ್ ತಮ್ಮ ಅನಿಸಿಕೆಯನ್ನು ಹಂಚಿಕೊಂಡು ಗ್ರಂಥಾಲಯದ ಮಹತ್ವ ಹಾಗೂ ಪುಸ್ತಕದ ಮಹತ್ವ ತಿಳಿಸಿದರು.ವಿದ್ಯಾರ್ಥಿಗಳು  ತಮ್ಮ ಅನಿ಼ಸಿಕೆಯನ್ನು ಹಂಚಿಕೊಂಡರು.

ಇದೇ ವೇಳೆ ಪುಸ್ತಕ ಸಪ್ತಾಹದ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪಪ್ರಾಂಶುಪಾಲರಾದ ಅರವಿಂದ ಗುರ್ಜಾರ್ ವಹಿಸಿದ್ದರು. ಗ್ರಂಥಪಾಲಕರಾದ ಶ್ರೀಮತಿ ಶಿಲ್ಪಾ ವರದಿ ಓದಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪ್ರಾರ್ಥಿಸಿದರೆ, ಸಂದೀಪ ಶೆಟ್ಟಿ ಸ್ವಾಗತಿಸಿದರು.ಆದರ್ಶ ವಂದಿಸಿದರು. ವಿದ್ಯಾರ್ಥಿನಿ ಭೂಮಿ ಆರ್‍.ಪಿ ಕಾರ್ಯಕ್ರಮವನ್ನು ನಿರೂಪಿಸಿದರು.

Click here to view the album

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s