ನರ್ಸರಿ ವಿದ್ಯಾರ್ಥಿಗಳ ಪದವಿ ವಿತರಣಾ ಕಾರ್ಯಕ್ರಮ

ಅಮಟೆಕೊಪ್ಪ –  ದಿನಾಂಕ ೨೪೨೦೧೭ ಶುಕ್ರವಾರದಂದು ಹೊಂಗಿರಣ ಶಾಲೆಯ ಆವರಣದಲ್ಲಿ ನಡೆದ ನರ್ಸರಿ ಪದವಿ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಡಾ ಪತಂಜಲಿ ಕೆ. ಪಿ ರವರು ಮಕ್ಕಳ ಪೋಷಕರನ್ನುದ್ದೇಶಿಸಿ ಮಾತನಾಡುತ್ತಾಮಕ್ಕಳಿಗೆ ಶಿಕ್ಷಣವೆಂಬುದು ಸಂತೋಷ ಕೊಡಬೇಕೆ ಹೊರತು ಹೊರೆಯಾಗಬಾರದು. ಮಕ್ಕಳಿಗೆ ಅವರು ಬಯಸುವಂತಹ ವಸ್ತುಗಳು ಸುಲಭವಾಗಿ ದೊರಕಿದರೆ ಮಕ್ಕಳ ಕಲ್ಪನಾಶಕ್ತಿ ಕಡಿಮೆಯಾಗುತ್ತದೆ ಮತ್ತು ಸುಲಭವಾಗಿ ಸಿಗುವ ವಸ್ತು ತನ್ನ ಬೆಲೆ ಕಳೆದುಕೊಳ್ಳುತ್ತದೆ. ಪೋಷಕರು ಮತ್ತು ಶಿಕ್ಷಕರು ಮಕ್ಕಳ ಕಲ್ಪನಾಶಕ್ತಿಯನ್ನು ಹೆಚ್ಚಿಸುವ ವಾತಾವರಣವನ್ನು ನಿರ್ಮಿಸಿಕೊಡಬೇಕು ಹಾಗೂ ಪೋಷಕರು ಮಕ್ಕಳಿಗೆ ಮಾದರಿಯಾಗಿರಬೇಕು. ನಮ್ಮ ಮಗು ನಮಗೆ ಮಾತ್ರ ಆಸ್ತಿಯಾಗದೇ ಇಡೀ ದೇಶಕ್ಕೆ ಆಸ್ತಿಯಾಗಬೇಕಾದರೆ ಅದನ್ನು ತಾನಾಗಿಯೇ ಬೆಳೆಯಲು ಬಿಡಿ. ದೇಶಕ್ಕೆ ಬುದ್ಧಿವಂತ ಮತ್ತು ಆರೋಗ್ಯವಂತ ಮಕ್ಕಳ ಅವಶ್ಯಕತೆಯಿದೆಎಂದು ಹೇಳಿದರು .

           ಕಾರ್ಯಕ್ರಮವು ಮಕ್ಕಳ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಮಕ್ಕಳು ಶೈಕ್ಶಣಿಕ ಅವಧಿಯಲ್ಲಿ ಕಲಿತುಕೊಂಡ ಕೆಲವು ವಿಷಯಗಳನ್ನು ಹಾಡು, ನೃತ್ಯ, ಹಾಗೂ ಅಭಿನಯದ ಮೂಲಕ ವೇದಿಕೆಯಲ್ಲಿ  ಪ್ರಸ್ತುತ ಪಡಿಸಿದರು.

            ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದಂತಹ ಧನ್ವಂತರಿ ಆಯುರ್ವೇದ ಕಾಲೇಜಿನ ಉಪನ್ಯಾಸಕರದ  ಡಾ. ಶ್ರೀಧರ ಗೋಖಲೆಯವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ  “ಮಕ್ಕಳು ಪ್ರಕೃತಿಯೊಡನೆ ಒಂದಾಗಿ ಬೆರೆತು ಕಲಿತಾಗ ಮನೋವಿಕಾಸಗೊಳ್ಳುತ್ತದೆಎಂದು ಹೇಳಿದರು.  ವೇದಿಕೆಯಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ಶೋಭಾ ರವೀಂದ್ರರವರು , ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯರಾದ ಶ್ರೀಮತಿ ಕಮಲಾ ಗುಡಿಗಾರ ರವರು, ಶಿಕ್ಷಕರು ಹಾಗೂ ಪೋಷಕರು ಉಪಸ್ಥಿತರಿದ್ದರು. ಅನಿತಾ ಪ್ರಾಸ್ತಾವಿಕ ನುಡಿಗಳನ್ನಾಡಿ, ವಸಂತಲಕ್ಷೀ ಸ್ವಾಗತಿಸಿ ಮಧುರಾ ನಿರೂಪಿಸಿ , ದೀಪಾ ವಂದಿಸಿದರು.

Click here to view the album

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s