ಹೊರಸಂಚಾರ

ಕಲ್ಲು, ಮಣ್ಣು, ನದಿ, ಗುಡ್ದ, ನಭ, ಪರ್ವತಗಳನ್ನೊಳಗೊಂಡ ಪರಿಸರ ಜಡವಲ್ಲ ಅದೊಂದು ಚೇತನ. ಇಂತಹ ಪರಿಸರದೊಂದಿಗೆ ಮಕ್ಕಳು ಬೆರೆತು ಕಲಿತಾಗ ನಿಜವಾದ ಕಲಿಕೆ ಉಂಟಾಗುತ್ತದೆ. ಆದ್ದರಿಂದ ಮಕ್ಕಳಲ್ಲಿ ಪರಿಸರದ ಬಗ್ಗೆ ಕಾಳಾಜಿ ಮೂಡಿಸಲು ದಿನಾಂಕ ೩೦೦೫೨೦೧೭ ರಂದು ನಮ್ಮ ಶಾಲೆಯ ಪ್ರಾಥಮಿಕ ವಿಭಾಗದ  ಮಕ್ಕಳಿಗೆ ಹತ್ತಿರದ ಶ್ರಮಜೀವಿ ಆಶ್ರಮಕ್ಕೆ ಹೊರಸಂಚಾರ  ಏರ್ಪಡಿಸಲಾಗಿತ್ತು. ತುಂತುರು ಮಳೆಯೊಂದಿಗೆ ಮಕ್ಕಳ ಹೊರಸಂಚಾರವು ಆರಂಭವಾಯಿತು. ಮಾರ್ಗದಲ್ಲಿ ಮಕ್ಕಳು ಗಿಡಮರಗಳನ್ನು  ವೀಕ್ಷಿಸುತ್ತಾ ಅದರ ಬಗ್ಗೆ ಚರ್ಚಿಸುತ್ತಾ  ಶ್ರಮಜೀವಿ ಆಶ್ರಮದೆಡೆಗೆ ಸಾಗಿದರು.

                      ನಂತರ ಶ್ರಮಜೀವಿ ಆಶ್ರಮದಲ್ಲಿ ಶಿಕ್ಷಕಿ ಶ್ರೀಮತಿ ಸುಧಾ ಅವರು ಶಾಲಾ ನಿಯಮಗಳನ್ನು ಮಕ್ಕಳಿಗೆ ತಿಳಿಸಿದರು. ಎಲ್ಲಾ ಶಿಕ್ಷಕರು ಗುಂಪುಗಳಾಗಿ ಮಾಡಿ ಹಾಡು, ನೃತ್ಯ, ಚಟುವಟಿಕೆಗಳ ಮೂಲಕ ಮಕ್ಕಳಿಗೆ ಕೌಶಲದ ಜೊತೆಗೆ ಆನಂದವನ್ನು ನೀಡಿದರು.

               ತದನಂತರ   ಮಕ್ಕಳು ಪಕ್ಕದಲ್ಲಿರುವ ಕೆರೆಯ ಬಳಿ ಸಾಗಿದರು. ಇತ್ತೀಚಿಗೆ ನೀರಿನ ಸಮಸ್ಯೆಯು ಕಂಡು ಬರುತ್ತಿದೆ.

ಇದನ್ನು ನೀಗಿಸಲು ಸ್ಥಳೀಯರು ಕೆರೆಯ ಹೂಳನ್ನು ಎತ್ತಿಸಿ ನವೀಕರಿಸುತ್ತಿದ್ದರು. ವಿಶೇಷವಾಗಿ ಪ್ರಾಣಿ ಪಕ್ಷಿಗಳಿಗೆ ಆಸರೆಯಾಗುವಂತೆ ನಿರ್ಮಿಸುತ್ತಿದ್ದಾರೆ.   ಕೆರೆಯ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಲಾಯಿತು. ಹಾಗೂ ಕೊಳವೆ ಬಾವಿಯಿಂದಾಗುವ ಪರಿಸರದ ಹಾನಿಯ ಬಗ್ಗೆ ಮತ್ತು ಇಂಗುಗುಂಡಿಗಳನ್ನು ನಿರ್ಮಿ ಸುವ ಕ್ರಮದ ಬಗ್ಗೆ ಕೂಡಾ ಮಕ್ಕಳಿಗೆ ತಿಳಿಸಿಕೊಡಲಾಯಿತು.

     ಹೊರಸಂಚಾರವು ಮಕ್ಕಳಿಗೆ ಪರಿಸರದ ಪ್ರೀತಿಯನ್ನು ಬೆಳೆಸುವಲ್ಲಿ ಸಹಕಾರಿಯಾಯಿತು. ಶಾಲೆಗೆ ಹಿಂದಿರುಗಿದ ನಂತರ ಮಕ್ಕಳು ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹಂಚಿಕೊಂಡರು.

click here to view the album

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s