ಗುರುಪೂರ್ಣಿಮ

ನಮ್ಮ ಜೀವನದಲ್ಲಿ ತಂದೆ-ತಾಯಿಯ ನಂತರದ ಸ್ಥಾನ ಗುರುವಿನದ್ದಾಗಿದೆ. ಜ್ಞಾನ  ಎಂಬ ಬೆಳಕಿನೆಡೆಗೆ ನಮ್ಮನ್ನು ಕೊಂಡೊಯ್ಯುವ ಈ ಮಹಾನುಭವರಾದ ಗುರುಗಳು ನಮ್ಮ ಜೀವನದ ದಿಕ್ಕನ್ನು ಬದಲಾಯಿಸುವುದರಲ್ಲಿ ಪ್ರಮುಖರಾಗಿದ್ದಾರೆ. ಇಂತಹ ಗುರುಗಳನ್ನು ಸ್ಮರಿಸಿಕೊಂಡು ಅವರಿಗೆ ಗೌರವ ತೋರುವ  ನಿಟ್ಟಿನಲ್ಲಿ ಹಾಗೂ ಮಕ್ಕಳಿಗೆ ಮೌಲ್ಯಯುತ ಶಿಕ್ಷಣ  ಮತ್ತು ನಮ್ಮ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ದಿನಾಂಕ ೦೮-೦೭-೧೭ರ ಶನಿವಾರದಂದು  ಹೊಂಗಿರಣ ಸ್ಕೂಲ್ ಆಫ಼್ ಎಕ್ಸಲೆನ್ಸ್,  ಅಮಟೆಕೊಪ್ಪದಲ್ಲಿ ಗುರುಪೂರ್ಣಿಮ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮವು ಗುರುಪರಂಪರೆಯ ಶ್ರೇಷ್ಠತೆಯನ್ನು ಪ್ರದರ್ಶಿಸುವುದರ  ಮೂಲಕ ಉದ್ಘಾಟನೆಗೊಂಡಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಉಪನ್ಯಾಸಕರಾದ ಶ್ರೀಯುತ ಕೆ. ಎಸ್. ಶ್ರೀಧರಮೂರ್ತಿ ಕಡಸೂರು ಇವರು ಕಥೆಯ ಮೂಲಕ ಮಕ್ಕಳಿಗೆ ಜೀವನದಲ್ಲಿ ಗುರುವಿನ ಮಹತ್ವ ತಿಳಿಸಿಕೊಟ್ಟರು.

ಕಾರ್ಯಕ್ರಮಕ್ಕೆ ಅಧ್ಯಕ್ಷರಾಗಿ ಆಗಮಿಸಿದ ಶ್ರೀಯುತ  ಜಗನ್ನಾಥ ಆರ್ .ಪತ್ರಿಕಾ ವರದಿಗಾರರು ಆನಂದಪುರಂ ಇವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ “ಇಂದು ನಮಗೆ ಗುರುಪೂರ್ಣಿಮೆಯಂತಹ ಕಾರ್ಯಕ್ರಮದ  ಅವಶ್ಯಕತೆ ಇದೆ. ಹಾಗೆಯೇ ಈ ಶಾಲೆಯಲ್ಲಿ ಮೌಲ್ಯಯುತ ಶಿಕ್ಷಣವನ್ನು ಮಕ್ಕಳಿಗೆ ನೀಡುತ್ತಿದ್ದಾರೆ. ಇದರಿಂದಾಗಿ ಮಕ್ಕಳು ಒಳ್ಳೆಯ ಸಂಸ್ಕಾರವನ್ನು ರೂಢಿಸಿಕೊಂಡಿದ್ದಾರೆ.”  ಎಂದು ನುಡಿದರು.

ಮಕ್ಕಳಿಂದ ಹಾಡು,ನೃತ್ಯ ಮತ್ತು ಶಿಕ್ಷಕರಿಂದ ಗುರುಮಹಿಮೆಯನ್ನು ಸಾರುವ ಕಿರುನಾಟಕ ಪ್ರದರ್ಶಿಸಲ್ಪಟ್ಟಿತು.ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಶೋಭಾ ರವೀಂದ್ರ,ಪ್ರಾಥಮಿಕ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಕಮಲಾಗುಡಿಗಾರ್,ಶಿಕ್ಷಕರು ಹಾಗೂ ಪೋಷಕರು ಉಪಸ್ಥಿತರಿದ್ದರು.

ಶಿಕ್ಷಕಿಯರಾದ ಶ್ರೀಮತಿ ವನಿತಾ ನಾಡಿಗ್ ಸ್ವಾಗತಿಸಿ,ಶ್ರೀಮತಿ ಜಯಶ್ರೀ ಪ್ರಾಸ್ತಾವಿಸಿ,ಶ್ರೀಮತಿ ಸುಧಾ ಶೇಟ್ ವಂದಿಸಿ,ಶ್ರೀಮತಿ ವೀಣಾ ನಿರೂಪಿಸಿದರು.

Click here to view the album

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s