ಪುಸ್ತಕ ಸಪ್ತಾಹ

ಸಾಗರದ ಅಮಟೆಕೊಪ್ಪದಲ್ಲಿರುವ ಹೊಂಗಿರಣ ವಿದ್ಯಾಸಂಸ್ಥೆಯಲ್ಲಿ ದಿನಾಂಕ ನವೆಂಬರ್ ೧೪ ರಿಂದ ೨೦ ರವರೆಗೆ ಪುಸ್ತಕ ಸಪ್ತಾಹವನ್ನು ಆಚರಿಸಲಾಯಿತು. ವಿದ್ಯಾರ್ಥಿಗಳಲ್ಲಿ ಓದುವ ಕೌಶಲ್ಯವನ್ನು ಬೆಳೆಸುವ ಜೊತೆಗೆ ಗ್ರಂಥಾಲಯದ ಕಡೆಗೆ ಆಕರ್ಷಿಸುವ ಸಲುವಾಗಿ ಪ್ರಾಥಮಿಕ ಪ್ರೌಢ ಹಾಗೂ ಕಾಲೇಜು ವಿಭಾಗಗಳ ವಿದ್ಯಾರ್ಥಿಗಳಿಗೆ  ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು.

ಇದರ ಅಂಗವಾಗಿ ನವೆಂಬರ್ ೨೦ ರಂದು ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಾಹಿತಿಗಳಾದ ಪರಮೇಶ್ವರ ಕರೂರು  ರವರು ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡಿ  “ಜಗತ್ತಿನ ಮಹಾನ್ ಸಾಧಕರ ಸಾಧನೆಯ ಹಿಂದೆ ಪುಸ್ತಕಗಳ ಪಾತ್ರವಿದೆ ಮತ್ತು ಆಧುನಿಕ ಜಗತ್ತಿನಲ್ಲಿ ಮಕ್ಕಳನ್ನು ಪುಸ್ತಕಗಳತ್ತ ಆಕರ್ಷಿಸುವುದು ಅಷ್ಟು ಸುಲಭವಲ್ಲ. ದೃಶ್ಯಮಾಧ್ಯಮಗಳು ಹೆಚ್ಚು ಹೆಚ್ಚು ವಿದ್ಯಾರ್ಥಿಗಳನ್ನು ಸೆಳೆಯುತ್ತಿವೆ. ಈ ಹಿಂದೆ ಪುಸ್ತಕವೇ ಜ್ಞಾನದ ಮೂಲವಾಗಿ, ಮನರಂಜನೆಯ ಆಕರವಾಗಿ ಬದುಕನ್ನು ರೂಪಿಸುವ ಕೆಲಸ ಮಾಡುತ್ತಿದ್ದವು” ಎಂದರು.

ಕಾರ್ಯಕ್ರಮದ  ಪ್ರಾಸ್ತಾವಿಕ ನುಡಿಗಳನ್ನಾಡಿದ ಗ್ರಂಥಪಾಲಕರಾದ ಶ್ರೀಮತಿ ಶಿಲ್ಪಾ ಎಮ್. ಹೆಚ್. ರವರು “ ಹೊಸ ಬಟ್ಟೆಯನ್ನು ತಗೆದುಕೊಂಡು ಹೇಗೆ ಅದನ್ನು ಕಪಾಟಿನಲ್ಲಿಡದೇ ಬಳಸುತ್ತೇವೆಯೋ ಹಾಗೆಯೇ ಗ್ರಂಥಾಲಯದ ಪುಸ್ತಕಗಳು ಬಳಕೆಯಾಗಬೇಕು “ ಎಂದರು.

ಕಾರ್ಯಕ್ರಮದಲ್ಲಿ  ಶಿಕ್ಷಕಿ ಕಲ್ಪನಾ ತಮ್ಮ ಅನಿಸಿಕೆ ಹಂಚಿಕೊಂಡರು. ವಿದ್ಯಾರ್ಥಿಗಳು ಪುಸ್ತಕದ ಮಹತ್ವದ ಕುರಿತು ಕಿರುನಾಟಕ ಪ್ರದರ್ಶಿಸಿದರು. ಕೆಲವು ಮಕ್ಕಳು ತಮ್ಮ ಅನಿಸಿಕೆ ಹಂಚಿಕೊಂಡರು.

ಇದೇ ವೇಳೆ ಪುಸ್ತಕ ಸಪ್ತಾಹದ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪಾಲಾಕ್ಷಪ್ಪನವರು ಮಾತಾನಾಡಿ “ ಒಂದು ಒಳ್ಳೆಯ ಪುಸ್ತಕ ಒಬ್ಬ ಒಳ್ಳೆಯ ಪ್ರಜೆಯನ್ನು ರೂಪಿಸುತ್ತದೆ. ಪುಸ್ತಕವೊಂದಿದ್ದರೆ ನೂರು ಗೆಳೆಯರಿದ್ದಂತೆ, ಪುಸ್ತಕ ಓದುವ ಅಭ್ಯಾಸ  ವಿದ್ಯಾರ್ಥಿಗಳ ಹವ್ಯಾಸವಾಗಬೇಕು “ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ಶೋಭಾರವೀಂದ್ರ ಮತ್ತು ಉಪಪ್ರಾಂಶುಪಾಲರಾದ ಅರವಿಂದ ಗುರ್ಜಾರ್ ರವರು ಹಾಜರಿದ್ದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪ್ರಾರ್ಥಿಸಿದರೆ ಅನುಷಾ ಸ್ವಾಗತಿಸಿದರು. ನಿಧಿ ವಂದಿಸಿದರು ಸಹನಾ ಕಾರ್ಯಕ್ರಮವನ್ನು ನಿರೂಪಿಸಿದರು.

Click here to view the album

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s