ಸ್ವಾಮಿ ವಿವೇಕಾನಂದ ಜಯಂತಿ

 ಎಲ್ಲರೊಳಗಡಗಿರುವ ಸ್ವಾಮಿ ವಿವೇಕಾನಂದ ಜಾಗೃತವಾಗಲಿ”

ಜಗತ್ತು ಕಂಡ ಶ್ರೇಷ್ಠ ಸಂತರಾದ ಸ್ವಾಮಿ ವಿವೇಕಾನಂದರು ಹೊಂದಿದ್ದ ಅಗಾಧವಾದ ಜ್ಞಾನ,  ವಿಶೇಷವಾದ ಶಕ್ತಿ, ಚೈತನ್ಯ ಹಾಗೂ ಅವರ ತತ್ವ ಸಂದೇಶಗಳು ಈಗಿನ ಮಕ್ಕಳಿಗೆ ಸ್ಪೂರ್ತಿ ಹಾಗೂ ಮಾರ್ಗದರ್ಶನವಾಗಲಿ ಎನ್ನುವ  ಉದ್ದೇಶದಿಂದ ದಿನಾಂಕ 12-01-2018 ರ ಶುಕ್ರವಾರದಂದು ಹೊಂಗಿರಣ ಸ್ಕೂಲ್ ಆಫ್ ಎಕ್ಸಲೆನ್ಸ್, ಅಮಟೇಕೊಪ್ಪದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವು ಶ್ರೀ ರಾಮಕೃಷ್ಣ ಮಹಾಸಂಘದ ಉದ್ಘಾಟನೆಯ ಮೂಲಕ ಚಾಲನೆಗೊಂಡಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಅಜಿತ್ ನಾಡಿಗ್,ಶಿರಸಿ ಇವರು, ವಿವೇಕಾನಂದರು ಬಾಲ್ಯದಲ್ಲಿ ಹೊಂದಿದ್ದ ವಿಶೇಷ ಆಲೋಚನಾ ಶಕ್ತಿ, ಧೈರ್ಯ ಹಾಗೂ ಆತ್ಮ ವಿಶ್ವಾಸದ ಕುರಿತಾಗಿ ಸುಂದರವಾದ ಕಥೆಗಳನ್ನು ಹೇಳುವುದರ ಮೂಲಕ ಮಕ್ಕಳಲ್ಲಿ ಅಡಕವಾಗಿರುವ ಶಕ್ತಿಯನ್ನು ಗುರುತಿಸಿಕೊಳ್ಳುವಂತೆ ಮಾರ್ಗದರ್ಶನವನ್ನು ನೀಡಿದರು.

ಕಾರ್ಯಕ್ರಮದ ಅಧ್ಯಕ್ಷರಾದ ರೇವತಿ ಎ.ಎಚ್ ಸರ್ಕಾರಿ ಪ್ರೌಢಶಾಲೆ, ಸುಭಾಷ್ ನಗರ, ಇವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಸ್ವಾಮಿ ವಿವೇಕಾನಂದರ ತತ್ವ ಆದರ್ಶಗಳನ್ನು ಇಂದಿನ ಮಕ್ಕಳು ಪಾಲಿಸಬೇಕು ಎಂದರು

ಮಕ್ಕಳಿಂದ ವಿವೇಕಾನಂದರ ಕುರಿತಾಗಿ ಭಾಷಣ, ನೃತ್ಯ ಹಾಗೂ ಕಿರುನಾಟಕವು ಪ್ರದರ್ಶಿಸಲ್ಪಟ್ಟಿತು.

ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲರಾದ ಶೋಭಾ ರವೀಂದ್ರ, ಪ್ರಾಥಮಿಕ ವಿಭಾಗದ ಮುಖ್ಯಸ್ಥರಾದ ಕಮಲಾ ಗುಡಿಗಾರ್, ಶಿಕ್ಷಕರು ಹಾಗೂ ಪೋಷಕರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಪ್ರಾರ್ಥನೆಯನ್ನು ಶಿಕ್ಷಕರಾದ ರಾಘವೇಂದ್ರ ಹಾಗೂ ದೀಪಾರವರು ಮಾಡಿದರು. ಸುಧಾ ಶೇಟ್ ರವರು ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿದ್ಯಾರ್ಥಿಗಳಾದ ಶ್ರೀವರ್ಷಿಣಿ (ಒಂದನೇ ತರಗತಿ) ಸ್ವಾಗತಿಸಿ, ಖುಷಿ ಆರ್ ಸಾಗರ್ (ಒಂದನೇ ತರಗತಿ) ಅತಿಧಿಗಳನ್ನು ಪರಿಚಯಿಸಿ, ನಿಧಿಶ್ರೀ ಎಸ್.ಆರ್ (ಎರಡನೇ ತರಗತಿ) ವಂದಿಸಿ, ಖುಷಿ ಫೆಲಿಕ್ಷ್ (ಮೂರನೇ ತರಗತಿ) ನಿರೂಪಿಸಿದರು.

ಫೋಟೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s